ಅವಂಧಾ ಕೋಟೆ ಅಥವಾ ಅವಂಧಾ ಕಿಲ್ಲಾ, ಇದು ಮಹಾರಾಷ್ಟ್ರದ ನಾಸಿಕ್ ಮತ್ತು ಅಹ್ಮದ್‌ನಗರದ ನಡುವಿನ ಔಂಧೆವಾಡಿ ಗ್ರಾಮದಲ್ಲಿ ನೆಲೆಗೊಂಡಿರುವ ಕೋಟೆಯಾಗಿದೆ. ಈ ಕೋಟೆಯು ಪಟ್ಟಾ ಕೋಟೆಯ ಸಮೀಪದಲ್ಲಿದೆ. ಪಟ್ಟಾ ಕಿಲ್ಲಾದ ನಿವಾಸಿಗಳನ್ನು ಪಟ್ಟೇಕರ್ ಎಂದು ಕರೆಯಲಾಗುತ್ತದೆ. ಅಂದರೆ "ಕೋಟೆ ಪಟ್ಟದ ನಿವಾಸಿಗಳು" ಎಂದರ್ಥ. == ಇತಿಹಾಸ == ಈ ಕೋಟೆಯ ಇತಿಹಾಸವು ಪಕ್ಕದಲ್ಲಿನ ಪಟ್ಟದ ಕೋಟೆಯಂತೆಯೇ ಇದೆ. ಜನವರಿ ೧೬೮೮ ರಂದು, ಈ ಕೋಟೆಯನ್ನು ಮತಾಬರ್ಖಾನ್ ನೇತೃತ್ವದ ಮೊಘಲ್ ಸೈನ್ಯವು ವಶಪಡಿಸಿಕೊಂಡಿತು. ಅವನು ಶ್ಯಾಮಸಿಂಗ್‌ನನ್ನು ಕೋಟೆಯ ಮುಖ್ಯಸ್ಥನಾಗಿ ನೇಮಿಸಿದನು. ನಂತರ ಈ ಕೋಟೆಯನ್ನು ೧೭೬೧ ರಲ್ಲಿ ಪೇಶ್ವೆಗಳು ವಶಪಡಿಸಿಕೊಂಡರು. ಅಂತಿಮವಾಗಿ ೧೮೧೮ ರಲ್ಲಿ ಈ ಕೋಟೆಯನ್ನು ಬ್ರಿಟಿಷರು ಗೆದ್ದರು. ಹಲವೆಡೆ ಮುರಿದ ಕಲ್ಲಿನ ಮೆಟ್ಟಿಲುಗಳಿಂದಾಗಿ ಈ ಕೋಟೆಯನ್ನು ಹತ್ತುವುದು ತುಂಬಾ ಕಷ್ಟಕರವಾಗಿದೆ. ಕಲ್ಲಿನ ತೊಟ್ಟಿಗಳು ಮತ್ತು ಎತ್ತರದ ಸ್ಥಳಕ್ಕೆ ಹೋಗುವ ಮೆಟ್ಟಿಲುಗಳನ್ನು ಹೊರತುಪಡಿಸಿ, ಕೋಟೆಯ ಮೇಲೆ ಕೆಲವೇ ಕೆಲವು ರಚನೆಗಳು ಉಳಿದಿವೆ. == ಉಲ್ಲೇಖಗಳು ==